ಉಲ್ಕಾಪಾತ (ಉಲ್ಕಾವೃಷ್ಟಿ)

Ulkapatha (Meteor Shower)

ಉಲ್ಕಾಪಾತವು ಬಾನಂಗಳದಲ್ಲಿ ಕಾಣುವ ಕಿಡಿಗಾರುವಿಕೆ ವಿಧಾನವಷ್ಟೇ. ಇವು ಬಹು ಆಕರ್ಷಣೀಯವಾಗಿ ಹೊತ್ತಿ ಉರಿದು ವರ್ಣಮಯ ಧೂಮವನ್ನು ಸೃಷ್ಟಿಸುತ್ತವೆ.

ಉಲ್ಕೆಗಳು ಯಾವುದೇ ನಿರ್ದಿಷ್ಟ ಧೂಮಕೇತುವಿನಿಂದ ಬೇರ್ಪಟ್ಟಿರುವ ಬಾಲದ ಅವಶೇಷಗಳಾಗಲೀ ಇಲ್ಲವೇ ಅನಾಮಿಕವಾಗಿ ಗೊತ್ತು ಗುರಿಯಿಲ್ಲದೇ ಅಲೆದಾಡುವ ಸಣ್ಣ ಪುಟ್ಟ ಧಾನ್ಯ ಗಾತ್ರದ ಅಂತರಿಕ್ಷದ ಕಣಗಳಾಗುತ್ತಿರುತ್ತವೆ. ಇವುಗಳು ಮರಳು, ಲೋಹ, ಅಲೋಹ, ಮಿಶ್ರಲೋಹಗಳಿಂದ ಕೂಡಿರುತ್ತವೆ.

ಉಲ್ಕೆಗಳು ಅಂತರಿಕ್ಷದಲ್ಲಿ ಬಹು ವೇಗವಾಗಿ ಚಲನೆಯಲ್ಲಿದ್ದರೂ ವಾತಾವರಣದ ಘರ್ಷಣೆಯ ಕೊರತೆಯಿಂದಾಗಿ ಹೊತ್ತಿ ಉರಿಯಲು ಸಾಧ್ಯವಾಗುವುದಿಲ್ಲ. ಭೂಮಿಯ ಗುರುತ್ವಾಕರ್ಷಣ ಬಲದಿಂದಾಗಿ ಇಂತಹ ವಸ್ತುಗಳು ಭೂಮಿಯೆಡೆಗೆ ಸೆಳೆಯಲ್ಪಡುತ್ತವೆ. ಉಲ್ಕೆಗಳು ಭೂ-ವಾತಾವರಣಕ್ಕೆ ಪ್ರವೇಶಿಸುತ್ತಿದ್ದಂತೆ, ವಾತಾವರಣದ ಘರ್ಷಣೆಯಿಂದಾಗಿ ಹತ್ತಿ ಉರಿಯಲಾರಂಭಿಸುತ್ತವೆ ಮತ್ತು ಭೂ-ಮೇಲ್ಮೈನಿಂದ ಸುಮಾರು 90 ಕಿಲೋಮೀಟರ್ ಎತ್ತರದಲ್ಲಿಯೇ ಸಂಪೂರ್ಣವಾಗಿ ಭಸ್ಮಗೊಳ್ಳುತ್ತವೆ. ಈ ರೀತಿಯ ಸಾವಿರಾರು ಕಣಗಳು ಹೊತ್ತಿ ಉರಿದು ಇಡೀ ಬಾನಂಗಳದಲ್ಲೇ ಬೆಂಕಿಯ ಕಿಡಿಮಳೆಗೆರೆಯುತ್ತವೆ. ಇದನ್ನು 'ಉಲ್ಕಾಪಾತ' ಅಥವಾ 'ಉಲ್ಕಾವೃಷ್ಟಿ' ಎಂದು ಕರೆಯುತ್ತಾರೆ.

ಉಲ್ಕೆಗಳು ಧೂಮಕೇತುವಿನಿಂದ ಬೇರ್ಪಟ್ಟ ನಂತರ ಸಮಾನಾಂತರವಾಗಿ ಚಲಿಸುವುದರಿಂದ, ಉಲ್ಕಾಪಾತವು ಆಕಾಶದ ಒಂದು ನಿರ್ದಿಷ್ಟ ಬಿಂದುವಿನಿಂದ ಪಸರಿಸಿದಂತೆ ಕಂಡುಬರುತ್ತದೆ.

ಉಲ್ಕೆಗಳು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿದ್ದಂತೆ, ಭೂಮಿಯ ಆವರ್ತಕ ಚಲನೆ (Rotation Motion) ಯಿಂದಾಗಿ, ಮತ್ತಷ್ಟು ವೇಗವನ್ನು ಪಡೆದುಕೊಳ್ಳುತ್ತವೆ ಮತ್ತು ಪೂರ್ವಾಭಿಮುಖವಾಗಿ ಚಲಿಸತೊಡಗುತ್ತವೆ. ಹೀಗಾಗಿ ಉಲ್ಕಾಪಾತವು ರಾತ್ರಿಗೆ ಹೋಲಿಸಿದಾಗ, ಪೂರ್ವ ದಿಕ್ಕಿನಲ್ಲಿ ಮುಂಜಾವಿನ ವೇಳೆಯಲ್ಲಿ ಹೆಚ್ಚು ಚೆನ್ನಾಗಿ ಕಾಣುತ್ತದೆ.

ಸಾಮಾನ್ಯವಾಗಿ ಉಲ್ಕೆಗಳು ಉರಿಯುವ ಸಂದರ್ಭದಲ್ಲಿ ವೈವಿಧ್ಯಮಯ ಬಣ್ಣಗಳನ್ನು ಸೃಷ್ಟಿಸುತ್ತವೆ. ಇದು ಆಯಾ ಉಲ್ಕೆಗಳು ಯಾವ ವಸ್ತುಗಳನ್ನೊಳಗೊಂಡಿರುತ್ತವೆ ಎಂಬುದನ್ನು ಹಾಗೂ ಅವುಗಳ ವೇಗ (ಉಲ್ಕಾವೇಗ)ವನ್ನು ಅವಲಂಭಿಸಿರುತ್ತದೆ. ಉಲ್ಕೆಗಳು ಹತ್ತಿ ಉರಿಯುವಾಗ ಕೆಲವೊಮ್ಮೆ ಸಿಡಿದು ಚದುರುತ್ತವೆ ಹಾಗೂ ಸುರ್ರ್... ಸುರ್ರ್... ಎಂದು ಶಬ್ದವನ್ನುಂಟು ಮಾಡುತ್ತವೆ.

ಕೆಲವು ಸಂಪ್ರದಾಯಗಳಲ್ಲಿ ಉಲ್ಕಾಪಾತವನ್ನು ಅಪಶಕುನವೆಂದು ಭಾವಿಸಲಾಗುತ್ತದೆ. ಮತ್ತೆ ಕೆಲವರು ಉಲ್ಕಾಪಾತವನ್ನು ನೋಡಿದರೆ ಮನಸ್ಸಿನಲ್ಲಿ ಅಂದುಕೊಂಡ ಇಚ್ಛೆ ಪೂರ್ತಿಯಾಗುತ್ತದೆ ಎಂಬ ನಂ. ಆದರೆ ವೈಜ್ಞಾನಿಕ ದೃಷ್ಟಿಯಿಂದ ಇದೊಂದು ಪ್ರಾಕೃತಿಕವಾಗಿ ಅಂತರಿಕ್ಷದಲ್ಲಿ ನಡೆಯುವ ಖಗೋಳ ಘಟನೆಯಾಗಿದೆ.

ಉಲ್ಲೇಖ: ವಿಕಿಪೀಡಿಯ

ತತ್ಸಮಾನ ಜ್ಞಾನ ಪುಟಗಳು

}